Karnataka NIC
NIC
ಮುಖಪುಟ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಇ-ಸೇವೆಗಳು

ಸೇವೆ ಆಯ್ಕೆ ವಿಕಲಚೇತನರಿಗೆ ಸಾಧನ ಸಲಕರಣೆಗಳು
ಸೇವೆ ಪೂರೈಕೆದಾರರು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ
ಈ ಸೇವೆ ಪಡೆಯಲು ಅರ್ಹತೆಗಳು 1. ಕನಿಷ್ಠ 40% ವಿಕಲಚೇತನತೆ ಹೊಂದಿರಬೇಕು
2.10 ವರ್ಷಗಳ ಕಾಲ ಕನಿಷ್ಠ ಕರ್ನಾಟಕ ನಿವಾಸಿಯಾಗಿರಬೇಕು ಅಥವಾ ರಾಜ್ಯದ 10 ವರ್ಷಗಳ ಕನಿಷ್ಠ ಅಧ್ಯಯನದ ಪ್ರಮಾಣಪತ್ರವನ್ನು ಒದಗಿಸಬೇಕು.
3.ಅಂಗವಿಕಲ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ನಗರ ವಾಸಿಯಾಗಿದ್ದಲ್ಲಿ ರೂ.24.000/- ಮತ್ತು ಗ್ರಾಮೀಣ ವಾಸಿಯಾಗಿದ್ದಲ್ಲಿ ರೂ.11.500/-ಗಳನ್ನು ಮೀರಿರಬಾರದು
4.ಕಳೆದ 3 ವರ್ಷಗಳಲ್ಲಿ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಯಿಂದ ಯಾವುದೇ ಸಹಾಯ / ಸಾಧನ ಸಲಕರಣೆ/ ಹಣಕಾಸಿನ ಸಹಾಯವನ್ನು ಪಡೆದಿರುವಂತಿಲ್ಲ.
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ
ದಾಖಲೆಗಳ ವಿವರಗಳು
1.  ಆದಾಯ ಪ್ರಮಾಣ ಪತ್ರ
2.  ಆಧಾರ್ ಕಾರ್ಡ್
3.   ವಯಸ್ಸಿಗೆ ಸಂಬಂಧಿಸಿದಂತೆ ಧೃಡೀಕರಣ ಪ್ರಮಾಣ ಪತ್ರ
4.  ವಿಕಲಚೇತನರ ಗುರುತಿನ ಚೀಟಿ
5.  ಜಾತಿ ಪ್ರಮಾಣ ಪತ್ರ (ರೂ.1000/-ಕ್ಕಿಂತ ಕಡಿಮೆ ಮೌಲ್ಯದ ಸಾಧನ ಸಲಕರಣೆಗಳಿಗೆ ಕಡ್ಡಾಯವಿಲ್ಲ)
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) ರೂ.15.000/- ಮೌಲ್ಯದವರೆಗಿನ ಸಾಧನ ಸಲಕರಣೆಯನ್ನು ಬಿಪಿಎಲ್ ಕುಟುಂಬದವರಿಗೆ ಉಚಿತವಾಗಿ ನೀಡಲಾಗುವುದು
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು ಅರ್ಜಿ ಸ್ವೀಕರಿಸಿದ 3 ತಿಂಗಳ ಒಳಗಾಗಿ ಸಾಧನ ಸಲಕರಣೆಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು
ಸೇವೆ ಪ್ರಕ್ರಿಯೆ
ಪ್ರಕ್ರಿಯೆ
1.   ಅರ್ಜಿದಾರರು ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಲಾಗ್ ಇನ್ ಆಗುವುದು
2.  ಸ್ವಯಂ ಘೋಷಣೆ ಫಾರ್ಮ್ ಲಭ್ಯವಿರುವ ಮುಖ್ಯ ಪುಟ ಅಪ್ಡೇಟ್ ಭಾಗವನ್ನುತೆರೆದು ಸ್ವತಃ ಘೋಷಣೆ ರೂಪದಲ್ಲಿ, ಡೌನ್ಲೋಡ್ ವಿವರಗಳು ತುಂಬಲು ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಸಹಿ ಅಗತ್ಯವಿದೆ
3.  ನ೦ತರ, ಅರ್ಜಿದಾರರು ತಮ್ಮ ವ್ಯಯಕ್ತಿಕ ಮೊಬೈಲ್ ಸಂಖ್ಯೆಯನ್ನು ನಮೂದಿಸಿದಾಗ ಓಟಿಪಿ ಸಂಖ್ಯೆಯು ಅವರ ಮೊಬೈಲಿಗೆ ಸಂದೇಶ ಬರುವುದು, ಸದರಿ ಓಟಿಪಿ ಸಂಖ್ಯೆಯನ್ನು ನಮೂದಿಸಿದಾಗ ಅರ್ಜಿದಾರರು ಬಯಸಿದ ಸೇವೆಯ ಅರ್ಜಿಯ ಪುಟ ಅನಾವರಣಗೊಳ್ಳುವುದು
4.  ಮನವಿದಾರರು ಸದರಿ ಅರ್ಜಿಯಲ್ಲಿ ಕೋರಿರುವ ಎಲ್ಲಾ ಮಾಹಿತಿಗಳನ್ನು ಸಂಬಂಧಿಸಿದ ಕಂಡಿಕೆಯಲ್ಲಿ ತುಂಬುವುದು ನಂತರ ಉಳಿಸು ಎಂಬುದನ್ನು ಕ್ಲಿಕ್ ಮಾಡುವುದು
5.  ಅರ್ಜಿ ಸಲ್ಲಿಸಿದ ನಂತರ ಒಂದು ಸ್ವೀಕೃತಿ ಸಂಖ್ಯೆಯು ಸಿಗುತ್ತದೆ
6.   ಅರ್ಜಿಯು ವಿಷಯನಿರ್ವಾಹಕರಿಗೆ ಹೋಗುತ್ತದೆ. ನಂತರ ವಿಷಯ ನಿರ್ವಾಹಕರು ದಾಖಲೆಗಳೊಂದಿಗೆ ಅರ್ಜಿದಾರರ ಎಲ್ಲಾ ವಿವರಗಳನ್ನು ಪರಿಶೀಲಿಸುವರು
7.  ಕೇಸ್ ವರ್ಕರ್ ದಾಖಲೆಗಳೊಂದಿಗೆ ಅರ್ಜಿದಾರರ ಎಲ್ಲಾ ವಿವರಗಳನ್ನು ಪರಿಶೀಲಿಸಲು
8.  ವಿಷಯ ನಿರ್ವಾಹಕರು ಅರ್ಜಿಗಳನ್ನು ಪರಿಶೀಲಿಸಿ, ಅಭಿಪ್ರಾಯದೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸುತ್ತಾರೆ
9.  DDWO ಎಲ್ಲಾ ವಿವರಗಳನ್ನು ನಿಯಮಾನುಸಾರ ಪರಿಶೀಲಿಸಿ, ಸರಿಯಾಗಿದ್ದರೆ, ಒಪ್ಪಿಗೆ ಸೂಚಿಸುತ್ತಾರೆ
10.  ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಅರ್ಜಿಗಳನ್ನು ಪರಿಶೀಲಿಸಿ ಮಂಜೂರು ಮಾಡುತ್ತಾರೆ
ಆನ್ಲೈನ್ ಪಾವತಿ ಮಾಡುವ ಮುಂಚಿತವಾಗಿ ದಯವಿಟ್ಟು ಅರ್ಜಿ ಮತ್ತು ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳು ಸಿದ್ಧಪಡಿಸಿಕೊಳ್ಳಿ

[X]